19th April 2026

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಶತ ಶತಮಾನಗಳಿಂದಲೂ ಸನ್ನಿಹಿತರಾಗಿ
ನಮ್ಮೆಲ್ಲರನ್ನು ಹರಸಿ ರಕ್ಷಿಸುತ್ತಿರುವ ಜಗನ್ಮಾತೆ ಜಗದೊಡೆಯನಾದ ಅಭಿನವ ತಿರುಪತಿಯ ಶ್ರೀ ಶ್ರೀನಿವಾಸನ ಹನ್ಮಂದಿರ ನಿವಾಸಿನಿ ಪಟ್ಟದರಸಿಯಾದ
ಶ್ರೀ ಪದ್ಮಾವತಿಯ (ಶ್ರೀ ಮಹಾಲಕ್ಷ್ಮೀಯ)
ಮಂದಿರದ ಪುನರ್ ನಿರ್ಮಾಣ ಕಾರ್ಯವು ಅತ್ಯಂತ ಸುಂದರವಾಗಿ ಪೂರ್ಣಗೊಂಡಿದ್ದು, ಹಾಗೂ ಮುಖ್ಯಪ್ರಾಣ ದೇವರ (ಜೋಡು ಹನುಮಂತ ದೇವರ)
ಸಂಪೂರ್ಣ ಶಿಲಾಮಯ ಮಂದಿರವೂ ಸಿದ್ಧವಾಗಿದೆ.
ಶ್ರೀ ಮಹಾಲಕ್ಷ್ಮೀದೇವಿಯ ಹಾಗೂ ರಾಮಭಕ್ತನಾದ ಶ್ರೀ ಹನುಮಂತದೇವರ ಪುನಃ ಪ್ರತಿಷ್ಠಾಪಿಸಲು
ಶ್ರೀಮನ್ ಮಧ್ವಚಾರ್ಯ ಮೂಲಮಹಾಸಂಸ್ಥಾನ
ಶ್ರೀಮದುತ್ತರಾದಿ ಮಠಾಧೀಶರಾದ
ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ, ಪರಾಭವನಾಮ ಸಂವತ್ಸರದ ವೈಶಾಖ ಶುದ್ಧ ತೃತೀಯ (ಅಕ್ಷಯ ತೃತೀಯಾ)
ಸೋಮವಾರ ದಿನಾಂಕ : 20-04-2026 ರಂದು ಶ್ರೀ ಮಹಾಲಕ್ಷ್ಮೀ (ಶ್ರೀ ಪದ್ಮಾವತಿ)ಯ ಹಾಗೂ ಮುಖ್ಯಪ್ರಾಣದೇವರ ಪುನಃ ಪ್ರತಿಷ್ಠಾಪನಾ ಹಾಗೂ
ಶ್ರೀ ಮೂಲರಾಮದೇವರ ಸಂಸ್ಥಾನ ಮಹಾಪೂಜಾದಿ
ಕಾರ್ಯಕ್ರಮಗಳು ನಡೆಯಲಿವೆ.
ಇಂದು ರವಿವಾರ ದಿನಾಂಕ 19-04-2026 ರಂದು ಮುಂಜಾನೆ 8.00 ಗಂಟೆಗೆ ಪುಣ್ಯಾಹವಾಚನ, ಮೃತ್ತಿಕಾಹರಣ, ಜಲಹರಣ, ವಾಸ್ತು ಶುದ್ಧಿ ಕಲಶ ಪ್ರತಿಷ್ಠಾಪನೆ, ದೇವತಾ ಆವಾಹನ.
ಸಾಯಂಕಾಲ 5.00 ಗಂಟೆಯಿಂದ 7.00ರ ವರೆಗೆ ಸಚಾಸ್ತ್ರ ಮತ್ತು ವೇದ ಪಾರಾಯಣ, ಅಷ್ಟಾವಧಾನ ನಡೆಯಲಿದೆ.
ಶ್ರೀ ಅನಂತ ಕುಲಕರ್ಣಿ
ಖ್ಯಾತ ಸಂಗೀತ ಕಲಾವಿದರು, ಬಾಗಲಕೋಟೆ ಇವರಿಂದ ದಾಸವಾಣಿ ಕಾರ್ಯಕ್ರಮ ಹಾಗೂ ಶ್ರೀಮತಿ ಶ್ರೀದೇವಿ ಶ್ರೀ ಅಶೋಕ ಕುಲಕರ್ಣಿ, ಶ್ರೀ ಶೈಲಜಾ ಜಹಗೀರದರ್, ಬಿಜಾಪೂರ, ಕು॥ ಸಹನಾ ನಾರಾಯಣರಾವ್ ಕುಲಕರ್ಣಿ, ಚಳಗೇರಿ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ನಾಳೆ ಸೋಮವಾರ ದಿನಾಂಕ 20-04-2026 ವೈಶಾಖ ಶುದ್ಧ ತೃತೀಯಾ (ಅಕ್ಷಯ ತೃತೀಯಾ) ದಂದು
ಪರಮ ಪೂಜ್ಯ ಶ್ರೀ ಶ್ರೀ ಶ್ರೀ 1008 ಶ್ರೀ ಮದುತ್ತರಾದಿ ಮಠಾದೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ದಿಗ್ವಿಜಯ, ಪೂರ್ಣಕುಂಭ ಸ್ವಾಗತ
ಜರುಗಲಿದೆ.
ಬೆಳಿಗ್ಗೆ : 7.00 ಗಂಟೆಗೆ ಪ್ರತಿಷ್ಠಾಪನಾಂಗ,
ಹೋಮ ಹವನ, ಪೂರ್ಣಾಹುತಿ ಮತ್ತು ಪಂಡಿತರಿಂದ ಪ್ರವಚನ ನಡೆಯಲಿದೆ. ಪರಮ ಪೂಜ್ಯ ಶ್ರೀ ಶ್ರೀ ಪಾದಂಗಳವರಿಂದ ಜಗನ್ಮಾತೆ ಶ್ರೀ ಪದ್ಮಾವತಿ
(ಮಹಾಲಕ್ಷ್ಮೀ)ಯ ಹಾಗೂ ಮುಖ್ಯಪ್ರಾಣದೇವರ ಪ್ರಾಣ ಪ್ರತಿಷ್ಠಾಪನೆ, ಕಲಶಾಭಿಷೇಕ 10.00 ಗಂಟೆಗೆ
ಪಾದಪೂಜಾ ಮುದ್ರಧಾರಣೆ, ಗುರುಗಳಿಂದ ಅಮೃತೋಪದೇಶ,
ಗುರುಪೂಜಾ, ಗುರುಗಳಿಗೆ ಗೌರವಾರ್ಪಣೆ ಸರ್ವ ಕರ್ಮ ಸಮರ್ಪಣ. ಶ್ರೀ ಮೂಲರಾಮದೇವರ ಸಂಸ್ಥಾನ ಮಹಾಪೂಜಾ ತದನಂತರ - ತಿರ್ಥಪ್ರಸಾದ
ಸರ್ವರಿಗೂ ಶ್ರೀಗಳಿಂದ ಫಲ-ಮಂತ್ರಾಕ್ಷಿತೆ ಜರುಗಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಆಗಮಿಸಿ ತನು ಮನ ಧನದಿಂದ ಸೇವೆ ಸಲ್ಲಿಸಬೇಕೆಂದು
ಸರ್ವರಿಗೂ ಸುಸ್ವಾಗತ ಕೊರಿರುವ,
ಶ್ರೀ ವೆಂಕಪ್ಪಯ್ಯ ಗೋಪಾಲಕೃಷ್ಣಪ್ಪಯ್ಯ ಸರ್ದೇಸಾಯಿ
ಶ್ರೀ ಸಂಜೀವಪ್ಪಯ್ಯ ಗೋಪಾಲಕೃಷ್ಣಪ್ಪಯ್ಯ ಸರ್ದೇಸಾಯಿ,
ಶ್ರೀ ಲಕ್ಷ್ಮೀದೇವಿ ಸೇವಾ ಸಮಿತಿಯ ಸರ್ವ ಸದಸ್ಯರು
ಹಾಗೂ ಸದ್ಭಕ್ತ ಮಂಡಳಿ, ಚಳಗೇರಿ.......
ವರದಿ: ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಸೋಮವಾರ ದಿನಾಂಕ 20-04-2026 ವೈಶಾಖ ಶುದ್ಧ ತೃತೀಯಾ (ಅಕ್ಷಯ ತೃತೀಯಾ) ದಂದು
ಪರಮ ಪೂಜ್ಯ ಶ್ರೀ ಶ್ರೀ ಶ್ರೀ 1008 ಶ್ರೀ ಮದುತ್ತರಾದಿ ಮಠಾದೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ದಿಗ್ವಿಜಯ, ಪೂರ್ಣಕುಂಭ ಸ್ವಾಗತ
ಜರುಗಲಿದೆ.
ಬೆಳಿಗ್ಗೆ : 7.00 ಗಂಟೆಗೆ ಪ್ರತಿಷ್ಠಾಪನಾಂಗ,
ಹೋಮ ಹವನ, ಪೂರ್ಣಾಹುತಿ ಮತ್ತು ಪಂಡಿತರಿಂದ ಪ್ರವಚನ ನಡೆಯಲಿದೆ. ಪರಮ ಪೂಜ್ಯ ಶ್ರೀ ಶ್ರೀ ಪಾದಂಗಳವರಿಂದ ಜಗನ್ಮಾತೆ ಶ್ರೀ ಪದ್ಮಾವತಿ
(ಮಹಾಲಕ್ಷ್ಮೀ)ಯ ಹಾಗೂ ಮುಖ್ಯಪ್ರಾಣದೇವರ ಪ್ರಾಣ ಪ್ರತಿಷ್ಠಾಪನೆ, ಕಲಶಾಭಿಷೇಕ 10.00 ಗಂಟೆಗೆ
ಪಾದಪೂಜಾ ಮುದ್ರಧಾರಣೆ, ಗುರುಗಳಿಂದ ಅಮೃತೋಪದೇಶ,
ಗುರುಪೂಜಾ, ಗುರುಗಳಿಗೆ ಗೌರವಾರ್ಪಣೆ ಸರ್ವ ಕರ್ಮ ಸಮರ್ಪಣ. ಶ್ರೀ ಮೂಲರಾಮದೇವರ ಸಂಸ್ಥಾನ ಮಹಾಪೂಜಾ ತದನಂತರ - ತಿರ್ಥಪ್ರಸಾದ
ಸರ್ವರಿಗೂ ಶ್ರೀಗಳಿಂದ ಫಲ-ಮಂತ್ರಾಕ್ಷಿತೆ ಜರುಗಲಿದೆ.

77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಶ್ರೀಮತಿ ರಶ್ಮಿ ಪ್ರಶಾಂತ್ ಕುಲಕರ್ಣಿ ಕುಷ್ಟಗಿ ಬರೆದಿರುವ ಲೇಖನ.

77 ನೇ ಗಣರಾಜ್ಯೋತ್ಸವದ ಪ್ರಯುಕ್ತ ಶ್ರೀಮತಿ ರಶ್ಮಿ ಪ್ರಶಾಂತ್ ಕುಲಕರ್ಣಿ ಕುಷ್ಟಗಿ ಬರೆದಿರುವ ಲೇಖನ.